ಫೆಬ್ರುವರಿ
	ಗ್ರಿಗೊರಿಯನ್ ತಾರೀಕು ಪಟ್ಟಿಯ (ಕ್ರೈಸ್ತ ವರ್ಷದ) ಎರಡನೆಯ ತಿಂಗಳು. 28 ದಿವಸಗಳಿವೆ. ಅಧಿಕ ವರ್ಷಗಳಲ್ಲಿ 29 ದಿವಸಗಳು. ರೋಮನ್ ರಿಪಬ್ಲಿಕನ್ ಕ್ಯಾಲೆಂಡರಿನ (ಫೆಬ್ರುಯೇರಿಯಸ್) 12ನೆಯ ತಿಂಗಳಿಗೆ ಇದು ಸಂವಾದಿಯಾದುದು. ತಾರೀಕು 15ರಂದು ನಡೆಯುವ ಫೆಬ್ರುವ (ಶುದ್ಧಿಸ್ನಾನ ಹಬ್ಬ) ಎಂಬುದರಿಂದ ಫೆಬ್ರುವರಿ ಎಂಬ ಹೆಸರು ಬಂದಿದೆ. ಭಾರತೀಯ ಪಂಚಾಂಗದ ರೀತ್ಯ ಸಾಧಾರಣವಾಗಿ ಮಾಘಮಾಸ ಫೆಬ್ರುವರಿಯಲ್ಲಿ ಬರುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ